top of page
Search

Hombevu's 3rd year anniversary

  1. ಲತಾ ಕೆ.ಟಿ

ಪರಿಸರ ಪ್ರೇಮಿ ಶೈಲಜಾ ಮೇಡಂ ಹಾಗೂ 'ಹೊಂಬೇವು' ತಂಡಕ್ಕೆ,


ಮೂರನೇ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು! 🍃


ತಾಯಿಯ ಮಮತೆಯಿಂದ ಪ್ರಕೃತಿಯನ್ನು ಆರಾಧಿಸುವ ಶೈಲಜಾ ಮೇಡಂ ಅವರ ಒಲವು ಮತ್ತು ಕಾಳಜಿಯೇ 'ಹೊಂಬೇವು' ಸಂಸ್ಥೆಯ ಉಸಿರು. ನೀವು ತೋರುತ್ತಿರುವ ಅದಮ್ಯ ಉತ್ಸಾಹ ಮತ್ತು ಪರಿಸರ ಪ್ರೇಮ ನಮ್ಮೆಲ್ಲರಿಗೂ ಆದರ್ಶವಾಗಿದೆ.


ಶೈಲಜಾ ಮೇಡಂ ಅವರೊಂದಿಗೆ ಕೈಜೋಡಿಸಿ ಶ್ರಮಿಸುತ್ತಿರುವ ಪ್ರತಿಯೊಬ್ಬ ತಂಡದ ಸದಸ್ಯರಿಗೂ ಅನಂತ ಧನ್ಯವಾದಗಳು. ನೀವು ಒಟ್ಟಾಗಿ ನಡೆಸುತ್ತಿರುವ ಪ್ರತಿಯೊಂದು ಪರಿಸರಪೂರಕ ಕಾರ್ಯಕ್ರಮಗಳು ನಮ್ಮ ನಾಡಿಗೆ ಹಸಿರಿನ ಉಡುಗೊರೆಯಾಗಿವೆ.


'ಹೊಂಬೇವು' ಸಂಸ್ಥೆಯ ಬೇರುಗಳು ಮತ್ತಷ್ಟು ಆಳವಾಗಿ ಬೆಳೆಯಲಿ, ಹೆಮ್ಮರವಾಗಿ ನೂರಾರು ಕಾಲ ನಿಸರ್ಗದ ಸೇವೆ ಮಾಡಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ. ನಿಮ್ಮ ನಿಸ್ವಾರ್ಥ ಸೇವೆಗೆ ನನ್ನದೊಂದು ಸಲಾಂ!


ಪ್ರೀತಿ ಮತ್ತು ಕೃತಜ್ಞತೆಗಳೊಂದಿಗೆ

  1. ಸಾ. ನಾ. ಶ್ರೀಲಕ್ಷ್ಮಿ

    ಶರಷಟ್ಪದಿ

    ಹೊಂಗೆ


    ಉಸಿರನು ಕೊಡುವುದು

    ಹಸಿರಿನ ಹೊಂಗೆಯು

    ಟಿಸಿಲನು ಚಾಚುತ ನೆರಳನ್ನು/

    ಬಿಸಿಯನು ತಡೆವುದು

    ಹಸಿಮರ ತಣ್ಣಗೆ

    ಜಸವನು ಬೇಡದ ಮಾತೆಯೊಲು//


    ಹೊಂಗೆಯ ಮರಗಳ

    ಟೊಂಗೆಯ ತುದಿಯಲಿ

    ಕಂಗೊಳಿಸುತಲಿವೆ ಹೂವುಗಳು/

    ಸಿಂಗರಿಸುತಲಿವೆ

    ರಂಗೇರಿಸುತಲಿ

    ಸಂಗಡ ಕರೆದಿವೆ ದುಂಬಿಗಳ//


    ಕಂಪಿನ ಹೂವಿದೆ

    ತಂಪಿನ ನೆರಳಿದೆ

    ಸೊಂಪಿನ ಹೊಂಗೆಯ ಬುಡದಲ್ಲಿ/

    ಗುಂಪಲಿ ಕುಳಿತಿವೆ

    ಕೆಂಪಿನ ದನಗಳು

    ಜೊಂಪಿನ ನಿದ್ದೆಯ ಮಾಡುತಲಿ//


    -- ಸಾ. ನಾ. ಶ್ರೀಲಕ್ಷ್ಮಿಶರಷಟ್ಪದಿ ಬೇವು


    ಬೇವು


    ಬೇವಿನ ಮರದಲಿ

    ಹೂವಿನ ಘಮಘಮ

    ಗಾವುದ ದೂರಕ್ಕೆ ಹರಡಿಹುದು/

    ಈವುದು ಮರಗಳು

    ಬೇವಿನ ಹಣ್ಣನು

    ನಾವದ ತಿನ್ನಲು ಸಿಹಿಯಿಹುದು//



    ರೋಗಕೆ ಮದ್ದಿದು

    ರಾಗಕೆ ಕಹಿಯಿದು

    ಭೋಗಕೆ ಸವಿರುಚಿಗಲ್ಲವಿದು/

    ಈಗಲೇ ತನ್ನಿರಿ

    ಬೇಗನೆ ಹಚ್ಚಿರಿ

    ನಾಗರ ದೋಷವದೋಡುವುದು//


    -- ಸಾ. ನಾ. ಶ್ರೀಲಕ್ಷ್ಮಿ

  2. ಹೊಂಬೇವು ತನ್ನ ಮೂರನೇ ವರ್ಷದ ಸಂಭ್ರಮದ ಹೆಜ್ಜೆ ಇಡುತ್ತಿರುವ ಈ ಶುಭಕ್ಷಣದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳು.

    ಹೊಂಬೇವು ಹೀಗೆ ಹೆಮ್ಮರವಾಗಿ ಬೆಳೆಯುತ್ತಾ, ಸಾವಿರಾರು ಮರಗಳನ್ನು ನೆಟ್ಟು, ಲಕ್ಷಾಂತರ ಹಕ್ಕಿ-ಪಕ್ಷಿಗಳಿಗೆ ಆಶ್ರಯವಾಗಲಿ; ಭೂಮಿತಾಯಿ ಹಸಿರು ಹೊದಿಕೆ ಹೊದ್ದು ಸದಾ ನಗುತಿರಲಿ ಎಂಬುದು ನನ್ನ ಮಹದಾಸೆಯಾಗಿದೆ.

    ಪ್ರಕೃತಿ ಸೇವೆಯ ಈ ಪುಣ್ಯಕಾರ್ಯದಲ್ಲಿ ಶೈಲಕ್ಕ ಅವರ ಜೊತೆಯಲ್ಲಿ ಅಳಿಲು ಸೇವೆಯಾದರೂ ಸಲ್ಲಿಸುವ ಭಾಗ್ಯ ನನಗೆ ದೊರೆತಿರುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ.

    ಶೈಲಕ್ಕ, ನೀವು ನನ್ನ ಐವತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಿದ “ಮಿಂಚು ಮಲ್ಲಿಗೆ” ನನ್ನ ತೋಟದಲ್ಲಿ ಅರಳಿ ನಗುತಿರುವ ಪ್ರತಿಯೊಂದು ಕ್ಷಣದಲ್ಲೂ, ನಿಮ್ಮ ಮಮತೆಯ ತುಂಬಿದ ಮುಖ ಕಣ್ಣೆದುರಿಗೆ ಬಂದು ನಿಲ್ಲುತ್ತದೆ.

    ನಿಮ್ಮ ನಿಸ್ವಾರ್ಥ ಸೇವೆ ಹೀಗೆ ನಿರಂತರವಾಗಿ ಮುಂದುವರಿಯಲಿ. ಹೂವಿನ ಜೊತೆ ನಾರು ಸ್ವರ್ಗ ಸೇರಿದಂತೆ, ನಿಮ್ಮ ಈ ಮಹೋನ್ನತ ಉದ್ದೇಶದಲ್ಲಿ ಜೊತೆಯಾಗಿ ಸಾಗುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ.

    ಮತ್ತೊಮ್ಮೆ ಮೂರನೇ ವರ್ಷದ ಸಂಭ್ರಮಕ್ಕೆ ಕಾಲಿಟ್ಟಿರುವ ಹೊಂಬೇವಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು.

    ಹೊಂಬೇವು ಇನ್ನಷ್ಟು ಎತ್ತರಕ್ಕೆ ಬೆಳೆದು, ಪ್ರಕೃತಿಯ ಜಗತ್ತಿನೆಲ್ಲೆಡೆ ಹರಡಲಿ.


 
 
 

Comments


hom-removebg-preview.png

Hombevu is an India-based non-profit initiative focused on protecting nature and spreading environmental awareness through community action and sustainable practices.

Get social with us!
  • Facebook Clean Grey
  • Twitter Clean Grey
  • LinkedIn Clean Grey
Share your thoughts!

​Telephone : ​+917259469747

Email : info@hombevu.com

​​​

© 2026 Hombevu. All rights reserved.

bottom of page